ಬೆಂಗಳೂರು ಕಂಬಳದಲ್ಲಿ ರಿಷಬ್ ಶೆಟ್ಟಿಗೆ ಟ್ರೈನಿಂಗ್ ಕೊಟ್ಟ ಟ್ರೈನರ್
ಇದಕ್ಕಾಗಿ ಮೊನ್ನೆಯೇ ದ.ಕ. ಜಿಲ್ಲೆಗಳಿಂದ ಪರಿಣಿತ ಕೋಣಗಳು ಮತ್ತು ಅವುಗಳ ಮಾಲಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಂಬಳ ನೋಡುವುದೇ ಒಂದು ವಿಶೇಷ. ಹೀಗಾಗಿ ಕೇವಲ ಕರಾವಳಿಗರು ಮಾತ್ರವಲ್ಲ, ಇಡೀ ಬೆಂಗಳೂರೇ ಇಂದು ಮತ್ತು ನಾಳೆ ಅರಮನೆ ಮೈದಾನದಲ್ಲಿ ಸೇರಲಿದೆ.
ಕಂಬಳ ಎಂದ ತಕ್ಷಣ ಬೆಂಗಳೂರಿಗರಿಗೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎಂಟ್ರಿ ನೆನಪಾಗಬಹುದು. ಕಂಬಳದ ಕೋಣಗಳನ್ನು ಓಡಿಸುತ್ತಾ ರಿಷಬ್ ಎಂಟ್ರಿ ಕೊಡುವ ದೃಶ್ಯ ನೆನಪಾಗುತ್ತದೆ.
ಈ ಸಿನಿಮಾದಲ್ಲಿ ಕಂಬಳ ಓಡಿಸಲು ರಿಷಬ್ ಶೆಟ್ಟಿಗೆ ಟ್ರೈನಿಂಗ್ ಕೊಟ್ಟವರು ಮಹೇಶ್ ಎಂಬವರು. ಅವರು ಈ ಬಾರಿ ಬೆಂಗಳೂರು ಕಂಬಳದಲ್ಲಿ ಬೋಲಾರದ ಕಾಟಿ ಕೋಣವನ್ನು ಓಡಿಸಲಿದ್ದಾರೆ.