ಕರೀನಾ ಕಪೂರ್​ಗೆ ಇಂದು ಜನ್ಮದಿನದ ಸಂಭ್ರಮ

ಗುರುವಾರ, 21 ಸೆಪ್ಟಂಬರ್ 2023 (16:49 IST)
ಬಾಲಿವುಡ್​ ನಟಿ ಕರೀನಾ ಕಪೂರ್​​ ಇಂದು ಜನ್ಮದಿನದ ಖುಷಿಯಲ್ಲಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ತಾರೆಗೀಗ 43 ವರ್ಷ ವಯಸ್ಸು. ಹಾಲ್ಗೆನ್ನೆ ಚೆಲುವೆ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದರು. ಮಕ್ಕಳಾದ ಬಳಿಕ ಇವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಅಲ್ಲೊಂದು ಇಲ್ಲೊಂದೆಂಬಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. 1980ರ ಸೆಪ್ಟೆಂಬರ್​ 21ರಂದು ಮುಂಬೈನಲ್ಲಿ ರಣದೀರ್​ ಕಪೂರ್​ ಮತ್ತು ಬಬಿತಾ ಕಪೂರ್​ ಪುತ್ರಿಯಾಗಿ ಜನಿಸಿದ ಕರೀನಾ ಕಪೂರ್​ 2000ರಲ್ಲಿ ಬಣ್ಣದ ಲೋಕ ಪ್ರವೇಶಿಸಿದರು. 'ರೆಫ್ಯೂಜಿ' ಅವರ ನಟನೆಯ ಮೊದಲ ಚಿತ್ರ. 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಸುಮಾರು 35 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ​, ಜಬ್​ ವಿ ಮೆಟ್​, ಕಭಿ ಖುಷಿ ಕಭಿ ಗಮ್​, ಲಾಲ್​ ಸಿಂಗ್​ ಚಡ್ಡಾ, ಭಜರಂಗಿ ಭಾಯ್​ಜಾನ್​, ಬಾಡಿಗಾರ್ಡ್​, ಕುರುಬಾನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ