ಸೆಂಚುರಿ ಸ್ಡಾರ್ ಶಿವಣ್ಣನ ಬರ್ತಡೇ ಸೆಲೆಬ್ರೇಷನ್ ಮಾಡಿದ ಅಭಿಮಾನಿಗಳು

ಬುಧವಾರ, 12 ಜುಲೈ 2023 (16:57 IST)
ಸೆಂಚುರಿ ಸಿನಿಮಾಗಳ ಸರದಾರ..ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಬರ್ತಡೇ ಸಂಭ್ರಮ.ಸ್ಯಾಂಡಲ್ ವುಡ್ ನಲ್ಲಿಂದು ಶಿವ ಸಂಭ್ರಮ.62ನೇ ವಸಂತಕ್ಕೆ ಶಿವಣ್ಣ ಕಾಲಿಟ್ಟಿದ್ದು,ಕೊರೊನಾ ಹಾಗೂ ಅಪ್ಪು ಅಗಲಿಕೆಯ ಕಾರಣ ಮೂರು ವರ್ಷಗಳಿಂದ ಬರ್ತಡೇ ಆಚರಿಸಿರಲಿಲ್ಲ.ಈಗಾಗಲೇ ನಾಗವಾರದಲ್ಲಿರುವ ಶಿವಣ್ಣನ ನಿವಾಸದ ಮುಂದೆ  ಫ್ಯಾನ್ಸ್ ಜಮಾಯಿಸಿದ್ದಾರೆ.ಬೆಳ್ಳಂ ಬೆಳಗ್ಗೆಯಿಂದಲೇ ಅಭಿಮಾನಿಗಳ ಕ್ಯೂ ನಿಂತಿದ್ದಾರೆ.
 
ಕೈಯಲ್ಲಿ ಕೇಕ್ ,ಸ್ವೀಟ್ ಹಾರವನ್ನ ಅಭಿಮಾನಿಗಳು ತಂದಿದ್ದು,ಮಧ್ಯರಾತ್ರಿಯಿಂದಲೇ ಶಿವಣ್ಣನ ಮನೆ ಮುಂದೇ ಜನಸಾಗರ.ರಾತ್ರಿ ಕೇಕ್ ಕತ್ತರಿಸಿ ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ.
 
ದಿನವಿಡೀ ಅಭಿಮಾನಿಗಳನ್ನ ಶಿವಣ್ಣ ಭೇಟಿಯಾಗಲಿದ್ದಾರೆ.ಇಂದು ಜೈಲರ್ ,ಕ್ಯಾಪ್ಟನ್ ಮಿಲ್ಲರ್ ಸಿನಿಮಾ ತಂಡಗಳಿಂದಲೂ ಅಭಿಮಾನಿಗಳಿಗೆ ಗಿಫ್ಟ್ ಸಿಗಲಿದೆ.ಶಿವಣ್ಣನ ಬರ್ತಡೇ ಪ್ರಯುಕ್ತ ಮನೆಯ ಬಳಿ ರಕ್ತದಾನ ಶಿಬಿರವನ್ನ  ಹಾಗೂ ಅನ್ನದಾನವನ್ನ ಶಿವಣ್ಣನ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ