ಹಿರಿಯ ನಟ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ
ಮಂಗಳವಾರ, 31 ಅಕ್ಟೋಬರ್ 2023 (16:30 IST)
Photo Courtesy: Twitter
ಬೆಂಗಳೂರು: 2022-23 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಚಲನಚಿತ್ರ ಕ್ಷೇತ್ರದಿಂದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಮತ್ತು ಡಿಂಗ್ರಿ ನಾಗರಾಜ್ ಗೆ ಪ್ರಶಸ್ತಿ ಲಭಿಸಿದೆ.
ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂದು ಈ ಇಬ್ಬರು ಕಲಾವಿದರಲ್ಲಿ ನೋವಿತ್ತು. ಅದೀಗ ನಿವಾರಣೆಯಾಗಲಿದೆ.
ವಿವಿಧ ಕ್ಷೇತ್ರದ ಒಟ್ಟು 68 ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಅವರಲ್ಲಿ ಚಲನಚಿತ್ರ ಕ್ಷೇತ್ರದಿಂದ ಈ ಇಬ್ಬರು ನಟರಿಗೆ ಗೌರವ ನೀಡಲಾಗುತ್ತಿದೆ. ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಗಾಲ್ಫರ್ ಅದಿತಿ ಅಶೋಕ್ ಸೇರಿದಂತೆ ಸಾಹಿತ್ಯ, ಕ್ರೀಡೆ, ಸಿನಿಮಾ, ಸಾಮಾಜಿಕ, ಶಿಕ್ಷಣ, ರಂಗಭೂಮಿ ಕ್ಷೇತ್ರದ ವಿವಿಧ ಸಾಧಕರಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಕರ್ನಾಟಕ ಸಂಭ್ರಮ-50 ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೂ ಪ್ರಶಸ್ತಿ ಘೋಷಣೆ ಮಾಡಲಾಗಿದೆ.