ಬೆಳ್ಳಂ ಬೆಳಿಗ್ಗೆ ಉದ್ಯಮಿಗಳಿಗೆ ಐಟಿ ಶಾಕ್: ಬೆಂಗಳೂರಿನ ಹಲವೆಡೆ ಐಟಿ ದಾಳಿ
ತೆರಿಗೆ ವಂಚನೆ ಅನುಮಾನದ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಂತಿನಗರ, ವಿಜಯನಗರ ಸೇರಿದಂತೆ ಹಲವು ಕಡೆ ಜ್ಯವೆಲ್ಲರಿ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಚೆನ್ನೈನಿಂದ ಆಗಮಿಸಿರುವ 15 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ರಾತ್ರೋ ರಾತ್ರಿ ಬೆಂಗಳೂರಿನ ಉದ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಜ್ಯುವೆಲ್ಲರಿ, ವೈದ್ಯರು, ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.