ಕಥಾ ಸಂಗಮ ಜತೆಗೆ ಇಂದು ಒಟ್ಟು ಆರು ಚಿತ್ರಗಳು ತೆರೆಗೆ

ಶುಕ್ರವಾರ, 6 ಡಿಸೆಂಬರ್ 2019 (09:37 IST)
ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಲ್ಲಿ ಒಟ್ಟು ಆರು ಚಿತ್ರಗಳು ತೆರೆಗೆ ಬರಲಿವೆ. ಇದರಲ್ಲಿ ರಿಷಬ್ ಶೆಟ್ಟಿಯ ಪ್ರಯೋಗಾತ್ಮಕ ಸಿನಿಮಾ ಕಥಾ ಸಂಗಮ ಕೂಡಾ ಒಂದು.


ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಕತೆಯನ್ನು ಒಂದೇ ಸಿನಿಮಾದಲ್ಲಿ ಹೇಳಲಾಗಿರುವ ವಿಶಿಷ್ಟ ಪ್ರಯೋಗಾತ್ಮಕ ಸಿನಿಮಾ ಕಥಾ ಸಂಗಮ. ಪುಟ್ಟಣ್ಣ ಕಣಗಾಲ್ ಸ್ಪೂರ್ತಿಯಿಂದ ಮಾಡಲಾಗಿರುವ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದರ ಹೊರತಾಗಿ ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿರುವ ಥ್ರಿಲ್ಲರ್ ಸಿನಿಮಾ ‘ಐ1’ ಮಾಸ್ಟರ್ ಆನಂದ್ ನಾಯಕರಾಗಿರುವ ‘ಹಗಲುಗನಸು’, ಸುಮನ್ ನಗರ್ ಕರ್ ಅಭಿನಯದ ‘ಬಬ್ರೂ’,  ’19 ಏಜ್ ನಾನ್ಸೆನ್ಸ್’ ಸಿನಿಮಾಗಳೂ ಇಂದು ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ