ಪುಟ್ಟಣ್ಣ ಕಣಗಾಲ್ ಅವರಿಗೆ ಈ ರೀತಿ ಗೌರವ ಸಲ್ಲಿಸಲಿದ್ದಾರೆ ರಿಷಬ್ ಶೆಟ್ಟಿ

ಸೋಮವಾರ, 4 ನವೆಂಬರ್ 2019 (09:57 IST)
ಬೆಂಗಳೂರು: ಕಥಾ ಸಂಗಮ ಸಿನಿಮಾ ಮಾಡಲು ಪುಟ್ಟಣ್ಣ ಕಣಗಾಲ್ ಅವರೇ ತನಗೆ ಸ್ಪೂರ್ತಿ ಎಂದು ರಿಷಬ್ ಹೇಳಿದ್ದರು. ಕನ್ನಡದಲ್ಲಿ ಇದೇ ರೀತಿ ಮೂರು ಕತೆಗಳನ್ನಿಟ್ಟುಕೊಂಡು ಹೊಸ ಪ್ರಯೋಗಕ್ಕೆ ಭುನಾದಿ ಹಾಕಿದ್ದು ಪುಟ್ಟಣ್ಣ ಕಣಗಾಲ್.


ಅದೇ ಸ್ಪೂರ್ತಿಯಲ್ಲಿ ಏಳು ಕತೆಗಳನ್ನಿಟ್ಟುಕೊಂಡು ಏಳು ನಿರ್ದೇಶಕರು ನಿರ್ದೇಶನ ಮಾಡಿರುವ ಹೊಸ ಕಥಾ ಸಂಗಮ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಸ್ಪೂರ್ತಿಯಾಗಿರುವ ಪುಟ್ಟಣ್ಣ ಕಣಗಾಲ್ ರನ್ನು ರಿಷಬ್ ಶೆಟ್ಟಿ ಮಾತಿಗಷ್ಟೇ ನೆನೆದು ಸುಮ್ಮನಾಗಿಲ್ಲ.

ತಮ್ಮ ಕಥಾ ಸಂಗಮ ಸಿನಿಮಾ ಟ್ರೈಲರ್ ನ್ನು ಪುಟ್ಟಣ್ಣ ಕಣಗಾಲ್ ಪತ್ನಿ ಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಅವರಿಂದಲೇ ಬಿಡುಗಡೆಗೊಳಿಸಲು ರಿಷಬ್ ನಿರ್ಧರಿಸಿದ್ದಾರೆ. ಆ ಮೂಲಕ ತಮಗೆ ಸ್ಪೂರ್ತಿಯಾದ ಶ್ರೇಷ್ಠ ನಿರ್ದೇಶಕನಿಗೆ ಸೂಕ್ತ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ