ಹಲ್ಲೆ ಪ್ರಕರಣ: ಬಹಿರಂಗವಾಗಿ ಸಂಯುಕ್ತಾ ಹೆಗಡೆ ಕ್ಷಮೆ ಕೋರಿದ ಕವಿತಾ ರೆಡ್ಡಿ

ಸೋಮವಾರ, 7 ಸೆಪ್ಟಂಬರ್ 2020 (09:53 IST)
ಬೆಂಗಳೂರು: ಪಾರ್ಕ್ ನಲ್ಲಿ ಮಾಡರ್ನ್ ಡ್ರೆಸ್ ಹಾಕಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಯುಕ್ತಾ ಹೆಗಡೆಗೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.


ಸಂಯುಕ್ತಾ ಮತ್ತು ಸ್ನೇಹಿತರಿಗೆ ಹಲ್ಲೆ ಮಾಡುವುದು ಮತ್ತು ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಕವಿತಾ ರೆಡ್ಡಿ ವರ್ತನೆಯನ್ನು ಖಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ವಿರುದ್ಧ ಸಂಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಷ್ಟೆಲ್ಲಾ ರದ್ದಾಂತವಾದ ಬಳಿಕ ಈಗ ಕವಿತಾ ತಮ್ಮ ವರ್ತನೆಗೆ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ