ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಪೊಲೀಸರಿಗೆ ಸ್ವಾತಂತ್ರ್ಯ ಬೇಕು ಎಂದೋರಾರು?

ಭಾನುವಾರ, 6 ಸೆಪ್ಟಂಬರ್ 2020 (18:26 IST)
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಕಿಡಿಕಾರಿದ್ಧಾರೆ.

ಡ್ರಗ್ಸ್ ದಂಧೆ ಮೊದಲಿಗಿಂತ ಈಗ ಜೋರಾಗಿ ನಡೆಯುತ್ತಿದೆ. ಪೊಲೀಸರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕರೆ ಖಂಡಿತವಾಗಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕುತ್ತಾರೆ ಎಂದಿದ್ದಾರೆ.

ಡ್ರಗ್ಸ್ ನಂತಹ ವ್ಯವಹಾರವನ್ನು ಹರಾಮಿಯಾಗಿ ಹಣ ಸಿಗೋರು ಮಾಡ್ತಾರೆ. ಅಂತಹ ದುಡ್ಡು ಸಿಗದಂತೆ ಮಾಡಬೇಕು ಎಂದರು.

ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್ ವುಡ್ ನ ಕೆಲವು ನಟ, ನಟಿಯರು ಪಾಲ್ಗೊಂಡಿರುವುದಕ್ಕೆ ಶಂಕರ್ ಬಿದರಿ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ