‘ಲಕ್ಕಿ ಮ್ಯಾನ್’ ನಲ್ಲಿ ಪುನೀತ್ ಅಭಿಮಾನಿಗಳಿಗೆ ಮತ್ತಷ್ಟು ಸರ್ಪೈಸ್!
ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದು, ಪುನೀತ್-ಪ್ರಭುದೇವ ಒಂದು ಸ್ಪೆಷಲ್ ಡ್ಯಾನ್ಸ್ ಮಾಡಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದಲ್ಲದೆ, ಅಪ್ಪು ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ತಿಳಿದುಬಂದಿದೆ.
ಈ ಸಿನಿಮಾದ ಡಬ್ಬಿಂಗ್ ಕೆಲಸ ಆರಂಭಿಸಿರುವ ಬಗ್ಗೆ ನಾಯಕ ಡಾರ್ಲಿಂಗ್ ಕೃಷ್ಣ ಮಾಹಿತಿ ನೀಡಿದ್ದು, ಇದರ ದೃಶ್ಯವೊಂದರ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಪ್ಪು ಸರ್ ಜೊತೆ ನಟಿಸಿದ್ದು ಯಾವತ್ತೂ ನನ್ನ ನೆನಪಿನಲ್ಲುಳಿಯಲಿದೆ ಎಂದಿದ್ದಾರೆ.