ರಿಲೀಸ್ ಗೆ ಮುನ್ನ ಟೆಂಪಲ್ ರನ್ ಮಾಡಿದ ಕೆಜಿಎಫ್ 2 ಬಳಗ
ನಿನ್ನೆಯಿಂದ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಮತ್ತು ಸೇರಿದಂತೆ ಕೆಜಿಎಫ್ ಬಳಗ ಕುಂದಾಪುರದಲ್ಲಿ ಬೀಡುಬಿಟ್ಟಿದೆ.
ನಿನ್ನೆ ತಮ್ಮ ಬಾಡಿಗಾರ್ಡ್ ಬರ್ತ್ ಡೇ ಆಚರಿಸಿಕೊಂಡಿದ್ದ ಯಶ್, ಇಂದು ತಮ್ಮ ತಂಡದ ಜೊತೆಗೆ ದೇವಾಲಯ ದರ್ಶನ ಮಾಡಿದ್ದಾರೆ. ಏಪ್ರಿಲ್ 14 ರಂದು ಕೆಜಿಎಫ್ 2 ರಿಲೀಸ್ ಗೆ ದಿನಾಂಗ ನಿಗದಿಯಾಗಿದ್ದು, ಪ್ರಚಾರಕ್ಕೆ ಮೊದಲು ದೇವರ ಆಶೀರ್ವಾದ ಪಡೆದಿದ್ದಾರೆ.