ವಿಶೇಷವಾಗಿ ರವಿತೇಜ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ ‘ಖಿಲಾಡಿ’ ಚಿತ್ರತಂಡ

ಬುಧವಾರ, 27 ಜನವರಿ 2021 (09:58 IST)
ಹೈದರಾಬಾದ್ : ಕ್ರ್ಯಾಕ್ ಚಿತ್ರದೊಂದಿಗೆ ಖ್ಯಾತಿ ಪಡೆದ ನಟ ರವಿತೇಜ ಅವರ  ಮುಂದಿನ ಚಿತ್ರ ಆಕ್ಷನ್ ಎಂಟರ್ ಟೈನ್ ಮೆಂಟ್ ಚಿತ್ರ ‘ಖಿಲಾಡಿ’. ‘ರಾಕ್ಷಾಸುಡು’ ಖ್ಯಾತಿಯ ರಮೇಶ್ ವರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ರವಿತೇಜ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಡಿಂಪಲ್ ಹಯಾತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಈ ಚಿತ್ರದ ಪೋಸ್ಟರ್ ಚಿತ್ರದ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ನಟ ರವಿತೇಜ ಅವರ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ‘ಖಿಲಾಡಿ’ ಚಿತ್ರ ತಂಡ ಇಂದು ಫಸ್ಟ್ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿತು. ಇದರಲ್ಲಿ ರವಿತೇಜ ಕೈಯಲ್ಲಿ ಸುತ್ತಿಗೆ ಹಿಡಿದು ಖಳನಾಯಕರನ್ನು ಬೇಟೆಯಾಡಲು ಸಿದ್ಧತೆ ನಡೆಸಿದ್ದಾರೆ. ಇದರಲ್ಲಿ ಅವರು ಸ್ಟೈಲಿಶ್ ಲುಕ್ ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ