ನವಂಬರ್ 12 ರಿಂದ ತೆಲುಗಿನಲ್ಲಿ ಕೋಟಿಗೊಬ್ಬ 3

ಶನಿವಾರ, 23 ಅಕ್ಟೋಬರ್ 2021 (08:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ತೆಲುಗಿನಲ್ಲಿ ‘ಕೋಟಿಕೊಕ್ಕಡು’ ಟೈಟಲ್ ನಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುತ್ತದೆ.


ಈ ಸಿನಿಮಾದ ತೆಲುಗು ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ. ನವಂಬರ್ 12 ರಿಂದ ತೆಲುಗಿನಲ್ಲಿ ಕೋಟಿಕೊಕ್ಕಡು ಸಿನಿಮಾ ತೆರೆ ಕಾಣಲಿದೆ.

ಕನ್ನಡದಲ್ಲಿ ಕಳೆದ ವಾರ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಕಿಚ್ಚ ಸುದೀಪ್ ಗೆ ತೆಲುಗಿನಲ್ಲೂ ಅಭಿಮಾನಿಗಳಿರುವುದರಿಂದ ಇಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣಬಹುದು ಎಂಬ ವಿಶ್ವಾಸ ಚಿತ್ರತಂಡದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ