ಕಿಚ್ಚ ಸುದೀಪ್ ಪೈಲ್ವಾನ್ ಅಡಿಯೋ ರಿಲೀಸ್ ಇಂದು

ಭಾನುವಾರ, 18 ಆಗಸ್ಟ್ 2019 (11:33 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾದ ಅಡಿಯೋ ರಿಲೀಸ್ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.


ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಪೈಲ್ವಾನ್ ಅಡಿಯೋ ರಿಲೀಸ್ ಕಳೆದ ವಾರವೇ ಚಿತ್ರದುರ್ಗದಲ್ಲಿ ನಡೆಯಬೇಕಿತ್ತು. ಆದರೆ ಭಾರೀ ಪ್ರವಾಹದಿಂದಾಗಿ ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ಸಮಾರಂಭ ಬೇಡವೆಂದು ಪೈಲ್ವಾನ್ ಬಳಗ ತೀರ್ಮಾನಿಸಿತ್ತು. ಇದೇ ಕಾರಣಕ್ಕೆ ಅಡಿಯೋ ರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು.

ಹೀಗಾಗಿ ಇಂದು ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಪೈಲ್ವಾನ್ ಅಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 12 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ