ಕಿಚ್ಚ ಸುದೀಪ್ ಫ್ಯಾಂಟಮ್ ಟ್ರೈಲರ್ ಅದ್ಧೂರಿ ಲಾಂಚ್ ಗೆ ಸ್ಪೆಷಲ್ ಕಾರಣವಿದೆ!

ಶನಿವಾರ, 12 ಡಿಸೆಂಬರ್ 2020 (09:36 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಟ್ರೈಲರ್ ನ್ನು ಚಿತ್ರತಂಡ ಅದ್ಧೂರಿಯಾಗಿ ಲಾಂಚ್ ಮಾಡಲು ನಿರ್ಧರಿಸಿದೆ. ಇದಕ್ಕೆ ಕಾರಣವೂ ಇದೆ.


ಈಗ ಕೊನೆಯ ಹಂತದ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಇದಾದ ಬಳಿಕ ಜನವರಿ ಅಂತ್ಯದಲ್ಲಿ ಟ್ರೈಲರ್ ಲಾಂಚ್ ಮಾಡಲು ತಯಾರಿ ನಡೆಸಲಿದೆ. ಇದು ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ತಿಯಾಗಲಿದೆ. ಈ 25 ವರ್ಷದ ವಾರ್ಷಿಕೋತ್ಸವವನ್ನು ಚಿತ್ರತಂಡ ವಿಶೇಷವಾಗಿ ಆಚರಿಸಲು ಈ ಕಾರ್ಯಕ್ರಮವನ್ನು ವೇದಿಕೆಯಾಗಿ ಬಳಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ