ಚಪ್ಪಾಳೆ ತಟ್ಟುವುದರಿಂದ ನಮಗೇನೂ ನಷ್ಟವಾಗಲ್ಲ ಎಂದ ಕಿಚ್ಚ ಸುದೀಪ್

ಭಾನುವಾರ, 22 ಮಾರ್ಚ್ 2020 (09:18 IST)
ಬೆಂಗಳೂರು: ಜನತಾ ಕರ್ಫ್ಯೂ ದಿನಕ್ಕೆ ಕರೆ ನೀಡಿರುವ ಪ್ರಧಾನಿ ಮೋದಿ ಇಂದು ಸಂಜೆ ಐದು ಗಂಟೆಗೆ ಚಪ್ಪಾಳೆ ತಟ್ಟಿ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸೋಣ ಎಂದು ಕರೆನೀಡಿದ್ದರು.


ಇದಕ್ಕೆ ಹೆಚ್ಚಿನ ಸೆಲೆಬ್ರಿಟಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಇದರಿಂದ ಆಗುವ ಪ್ರಯೋಜನವಾದರೂ ಏನು ಎಂದು ಕೊಂಕು ನುಡಿದವರೂ ಇದ್ದಾರೆ. ಇಂತಹವರಿಗೆ ಕಿಚ್ಚ ಸುದೀಪ್ ತಕ್ಕ ಉತ್ತರ ನೀಡಿದ್ದಾರೆ.

‘ದಯವಿಟ್ಟು ಇದರಲ್ಲಿ ಭಾಗಿಯಾಗಿ. ಇದರಿಂದ ನಮಗೆ ಏನಾದರೂ ಕಳೆದುಕೊಳ್ಳುವಕ್ಕಿದೆಯೇ? ಇಲ್ಲ. ನಾವು ಏನಾದರೂ ಪಡೆದುಕೊಳ್ಳುತ್ತೇವೆಯೇ? ಬಹುಶಃ.. ಆದರೂ ಪ್ರಯತ್ನಿಸೋಣ. ಏನೇ ಆದರೂ ಇದು ನಮ್ಮ ಜೀವನಕ್ಕಾಗಿ. ಐದು ಗಂಟೆಗೆ ಚಪ್ಪಾಳೆ ತಟ್ಟೋಣ’ ಎಂದು ಸುದೀಪ್ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ