ಬೆಂಗಳೂರು: ಕೊರೋನಾವೈರಸ್ ಹರಡದಂತೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಇಂದು ದಿನವಿಡೀ ಜಾರಿಯಲ್ಲಿರಲಿದೆ. ಭಾನುವಾರದ ದಿನ ಯಾವತ್ತಿನಂತೇ ಔಟಿಂಗ್ ಹೋಗಲು ಸಾಧ್ಯವಾಗದೇ ಇರುವಾಗ ಮನೆಯಲ್ಲೇ ಕೂತು ಏನು ಮಾಡಬಹುದು?
ಅಯ್ಯೋ ದಿನವಿಡೀ ಇಂದು ಮನೆಯಲ್ಲೇ ಕೂರಬೇಕಲ್ಲಾ ಎಂದು ಕೊರಗಬೇಡಿ. ಈ ದಿನವನ್ನು ನಿಮ್ಮ ಮನೆಯವರ ಜತೆ ಖುಷಿಯಾಗಿ, ಕ್ರಿಯಾತ್ಮಕವಾಗಿ ಕಳೆಯಲು ಬಳಸಿಕೊಳ್ಳಿ. ಇದರಿಂದ ದೇಶಕ್ಕೂ ಉತ್ತಮ, ನಿಮಗೂ ಉತ್ತಮ.
ಮನೆ ಕ್ಲೀನಿಂಗ್ ಮಾಡುವ ಕೆಲಸವಿದ್ದರೆ ಇಂದಿಗೆ ಮೀಸಲಿಡಿ.
ಗಂಡು ಮಕ್ಕಳು ಒಂದು ದಿನದ ಮಟ್ಟಿಗೆ ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಿಂದ ಬ್ರೇಕ್ ಕೊಟ್ಟು ತಾವೇ ಅಡುಗೆ ಮಾಡಿ ಖುಷಿಪಡಬಹುದು.
ಮಕ್ಕಳೊಂದಿಗೆ ಮಕ್ಕಳಾಗಿ. ಪೈಂಟಿಗ್ ಮಾಡಿ, ಮನೆಯೊಳಗೇ ಆಡಬಹುದಾದ ಆಟವಾಡಿ.
ಕೊರೋನಾ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿ.
ಹೊಸ ಅಡುಗೆ, ಹೊಸ ರುಚಿ ಟ್ರೈ ಮಾಡಿ ಮನೆಯವರ ಜತೆ ಪ್ರಯೋಗ ಮಾಡಿ!
ಮನೆಯವರೆಲ್ಲಾ ಜತೆಯಾಗಿ ಕೂತು ಒಂದೊಳ್ಳೆ ಸಿನಿಮಾ ನೋಡಿ ಮನಸ್ಸೂ ಫ್ರೆಸ್ ಆಗುತ್ತೆ.
ಒಳ್ಳೆಯ ಪುಸ್ತಕ ಓದುವುದು, ಬರೆಯುವುದು ಏನಾದ್ರೂ ಟ್ರೈ ಮಾಡಿ ನೋಡಿ.