ಫ್ಯಾಂಟಮ್ ನಲ್ಲಿ ಕನ್ನಡಿಗರಿಗೇ ಅವಕಾಶ ಕೊಟ್ಟಿದ್ದೆವು: ಅಭಿಮಾನಿಗೆ ಕಿಚ್ಚ ಸುದೀಪ್ ಸ್ಪಷ್ಟನೆ

ಸೋಮವಾರ, 23 ನವೆಂಬರ್ 2020 (09:03 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಪೂರ್ತಿಗೊಳಿಸಿದ ಸುದ್ದಿಯನ್ನು ಸ್ವತಃ ಸುದೀಪ್ ನೀಡಿದ್ದರು.


ಸುದೀಪ್ ರ ಈ ಟ್ವೀಟ್ ಗೆ ಅಭಿಮಾನಿಯೊಬ್ಬರು ಹೈದರಾಬಾದ್ ನಲ್ಲಿ ಶೂಟಿಂಗ್ ಮಾಡಿದ್ದೇಕೆ? ಮುಂದಿನ ಬಾರಿ ಆದಷ್ಟು ನಿಮ್ಮ ಸಿನಿಮಾಗಳನ್ನು ಕರ್ನಾಟಕದಲ್ಲೇ ಮಾಡಿ. ಇದರಿಂದ ಎಷ್ಟೋ ಕನ್ನಡಿಗ ತಂತ್ರಜ್ಞರಿಗೆ ಕೆಲಸ ಸಿಕ್ಕಂತಾಗುತ್ತದೆ ಎಂದು ಮನವಿ ಮಾಡಿದ್ದರು. ಅಭಿಮಾನಿಯ ಮನವಿಗೆ ಸ್ಪಂದಿಸಿರುವ ಕಿಚ್ಚ ‘ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕರೂ ಕನ್ನಡಿಗರೇ. ಆದಷ್ಟು ಕನ್ನಡ ನಾಡಿನ ತಂತ್ರಜ್ಞರನ್ನು ಬಳಸಿಯೇ ಸಿನಿಮಾ ಚಿತ್ರೀಕರಣ ನಡೆದಿದೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ