ನನ್ನ ಅಜ್ಜಿಯನ್ನು ಕಳೆದುಕೊಂಡಿರುವುದಕ್ಕಿಂತಲೂ ನಮ್ಮ ಮನೆಯ ಮುಂದೆ ಜಮಾಯಿಸಿದ್ದ ಕೆಲವರು ಕಿರುಚಾಡುತ್ತಿದ್ದುದು, ಘೋಷಣೆ ಕೂಗುತ್ತಿದ್ದುದು, ಕ್ಯಾಮರಾಗಳನ್ನು ನಮ್ಮ ದುಃಖತಪ್ತ ಮುಖಗಳಿಗೆ ಫೋಕಸ್ ಮಾಡಲೆತ್ನಿಸುತ್ತಿದ್ದು ಎಲ್ಲಕ್ಕಿಂತ ಕೆಟ್ಟ ಅನುಭವವಾಗಿತ್ತು. ಇದಕ್ಕಿಂತಲೂ ಅಮಾನವೀಯವಾಗಿ ನಡೆದುಕೊಳ್ಳಲು ಸಾಧ್ಯವೇ ಎನಿಸಿತು. ನನ್ನ ತಂದೆ ಅವರ ತಾಯಿಗಾಗಿ ಅಳುತ್ತಿದ್ದರೆ, ಆಕೆಯನ್ನು ಶಾಂತಿಯುತವಾಗಿ ಕಳುಹಿಸಿಕೊಡಲು ಪ್ರಯತ್ನಿಸುತ್ತಿದ್ದರೆ ಅವರನ್ನು ತಳ್ಳುತ್ತಿದ್ದರು. ನಾನು ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಈ ಜನರು ಎಷ್ಟು ಒಳ್ಳೆಯ ರೀಲ್ಸ್ ಮಾಡಬಹುದು ಎಂದು ತಳ್ಳಾಡುತ್ತಿದ್ದರು ಎಂದು ಸಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.