ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್
ಕಿಚ್ಚ46 ಸಿನಿಮಾ ಶೂಟಿಂಗ್ ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಈ ಸಿನಿಮಾದ ಶೂಟಿಂಗ್ ಮಹಾಬಲಿಪುರಂನಲ್ಲಿ ನಡೆಯಲಿದೆ. ಪಕ್ಕಾ ಆಕ್ಷನ್ ಥ‍್ರಿಲ್ಲರ್ ಕತೆ ಹೊಂದಿರುವ ಸಿನಿಮಾದಲ್ಲಿ ಕಿಚ್ಚ ಸಖತ್ ಆಗಿ ಫೈಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.
ಇದೀಗ ಈ ಸಿನಿಮಾಗಾಗಿ ಸುದೀಪ್ ಉದ್ದ ಕೂದಲು ಬೆಳೆಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಗೆ ಮೊದಲು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿರುವ ಸುದೀಪ್ ಹೊಸ ಹೇರ್ ಸ್ಟೈಲ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.