ಬುಕ್ ಮೈ ಶೋನಲ್ಲಿ ಹಾಲಿವುಡ್ ಚಿತ್ರವನ್ನೂ ಹಿಂದಿಕ್ಕಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ

ಬುಧವಾರ, 26 ಜುಲೈ 2023 (17:32 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಳೆದ ಒಂದು ವಾರದಿಂದ ಸದ್ದು ಮಾಡುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಈಗ ಹಾಲಿವುಡ್ ಸಿನಿಮಾವನ್ನೂ ಮೀರಿಸಿದೆ.

ಬುಕ್ ಮೈ ಶೋ ಆಪ್ ನಲ್ಲಿ ಹಾಸ್ಟೆಲ್ ಹುಡುಗರು ಸಿನಿಮಾ ಇದೇ ವಾರ ಬಿಡುಗಡೆಯಾಗಿದ್ದ ಆಪನ್ ಹೈಮರ್ ಮತ್ತು ಬಾರ್ಬಿ ಸಿನಿಮಾವನ್ನೂ ಹಿಂದಿಕ್ಕಿ ಅತ್ಯುತ್ತಮ ರೇಟಿಂಗ್ ಪಡೆದುಕೊಂಡಿದೆ.  ಆಪನ್ ಹೈಮರ್ ಮತ್ತು ಬಾರ್ಬಿ ಕ್ರಮವಾಗಿ 10 ಕ್ಕೆ 8.8 ಮತ್ತು 7.7 ರೇಟಿಂಗ್ ಪಾಯಿಂಟ್ ಪಡೆದುಕೊಂಡರೆ ಇದೆಲ್ಲವನ್ನೂ ಮೀರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ 10 ಕ್ಕೆ 8.9 ರೇಟಿಂಗ್ ಪಾಯಿಂಟ್ ಪಡೆದಿದೆ.

ಜನರೇ ವೋಟ್ ಮಾಡಿ ಚಿತ್ರ ಚೆನ್ನಾಗಿದೆ ಎಂದು ಸೂಚಿಸುವ ಈ ಅಂಕ ಇದಾಗಿದೆ. ಈ ಮೂಲಕ ಹಾಲಿವುಡ್ ಸಿನಿಮಾವನ್ನೂ ಮೀರಿಸಿದ ಹೆಮ್ಮೆ ಕನ್ನಡ ಸಿನಿಮಾದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ