ಅಭಿಮಾನಿಯ ಪತಿಯ ಜೀವ ಉಳಿಸಿದ ಕಿಚ್ಚ ಸುದೀಪ್

ಭಾನುವಾರ, 16 ಮೇ 2021 (10:04 IST)
ಬೆಂಗಳೂರು: ಕಿಚ್ಚ ಸುದೀಪ್ ಕಷ್ಟದಲ್ಲಿರುವವರಿಗೆ ಹಿಂದೆ ಮುಂದೆ ನೋಡದೇ ಸಹಾಯ ಮಾಡಲು ಮುಂದಾಗುತ್ತಾರೆ. ಈಗ ಕೊರೋನಾ ಕಾಲದಲ್ಲಂತೂ ಕಿಚ್ಚ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ.


ಇದೀಗ ಕಿಚ್ಚ ತಮ್ಮ ಅಭಿಮಾನಿ ಮಹಿಳೆ ಸೌಮ್ಯ ಎಂಬವರ ಪತಿಯ ಕೊರೋನಾ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಸುದ್ದಿಯಾಗಿದೆ. ಸುದೀಪ್ ಸಹಾಯ ನೆನೆಸಿಕೊಂಡು ಅಭಿಮಾನಿ ಸೌಮ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಮೂಲಕ ಕಣ್ಣೀರು ಹಾಕುತ್ತಲೇ ಧನ್ಯವಾದ ಸಲ್ಲಿಸಿದ್ದಾರೆ.

ಸುದೀಪ್ ಸರ್ ನನ್ನ ಗಂಡನ ಜೀವ ಉಳಿಸಿದ್ರು ಮುಂದಿನ ಜನ್ಮವಿದ್ದರೆ ಕಿಚ್ಚನ ಅಭಿಮಾನಿಯೇ ಹುಟ್ಟುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ