ಲಸಿಕೆ ಪಡೆಯುವ ಮುನ್ನ ನಟಿ ರಾಗಿಣಿ ರಕ್ತದಾನ

ಶನಿವಾರ, 15 ಮೇ 2021 (11:20 IST)
ಬೆಂಗಳೂರು: ಕೊರೋನಾ ಸಂಕಷ್ಟಪೀಡಿತರ ನೆರವಿನಲ್ಲಿ ತೊಡಗಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಈಗ ಮತ್ತೊಂದು ಸಮಾಜಮುಖೀ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕೊರೋನಾ ಲಸಿಕೆ ಪಡೆದ ಬಳಿಕ ರಕ್ತದಾನ ಮಾಡಲು ಕೆಲವು ಸಮಯ ಕಾಯಬೇಕು. ಹೀಗಾಗಿ ರಾಗಿಣಿ ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿದ್ದಾರೆ.

‘ನನ್ನ ಕೆಲಸದ ಬಗ್ಗೆ ಹೆಮ್ಮೆಯಿದೆ. ರಕ್ತದಾನ ಕೊರೋನಾ ಸಂಕಷ್ಟ ಕಾಲದಲ್ಲಿ ಅತ್ಯಮೂಲ್ಯ. ಇದರಿಂದ ಕೇವಲ ಒಬ್ಬರ ಜೀವವಲ್ಲ, ಐವರ ಜೀವವುಳಿಸಬಹುದು’ ಎಂದು ರಾಗಿಣಿ ಸಂದೇಶ ಬರೆದಿದ್ದಾರೆ. ಇದರ ಜೊತೆಗೇ ಬಡವರಿಗೆ ಊಟ ಕೊಡುವ ಕೆಲಸ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ