ಕಿಚ್ಚ ಸುದೀಪ್ ಈಗ ದೇಶದ 50 ಅಪೇಕ್ಷಣೀಯ ಪುರುಷರಲ್ಲೊಬ್ಬ!

ಬುಧವಾರ, 28 ಜೂನ್ 2017 (12:27 IST)
ಬೆಂಗಳೂರು: ಕಿಚ್ಚ ಸುದೀಪ್ ಕೇವಲ ಸ್ಯಾಂಡಲ್ ವುಡ್ ಸ್ಟಾರ್ ಆಗಿ ಉಳಿದಿಲ್ಲ. ನೆರೆ ರಾಜ್ಯಗಳ ಸಿನಿಮಾಗಳಲ್ಲೂ ಸದ್ದು ಮಾಡುವ ಕಿಚ್ಚನಿಗೆ ಹೊಸದೊಂದು ಟೈಟಲ್ ಸಿಕ್ಕಿದೆ.

 
ಅದೇನಪ್ಪಾ ಎಂದರೆ, ಅವರೀಗ ದೇಶದ ಟೈಮ್ಸ್ ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ ನಾಮಾಂಕಿತರಾಗಿದ್ದಾರೆ. 50 ಜನರ ಪೈಕಿ ಸುದೀಪ್ ಕೂಡಾ ಒಬ್ಬರು ಎಂಬುದು ನಮಗೆ ಹೆಮ್ಮೆಯ ವಿಷಯ.

ವಿಶೇಷವೆಂದರೆ ಈ ಪಟ್ಟಿ ಕೇವಲ ಸಿನಿಮಾ ಸ್ಟಾರ್ ಗಳಿಗೆ ಸಂಬಂಧಿಸಿದ್ದಲ್ಲ. ಮಾಡೆಲ್ ಕ್ಷೇತ್ರವೂ ಸೇರಿದಂತೆ 50 ಅಪೇಕ್ಷಣೀಯ ಪುರುಷರ ಪೈಕಿ ನಮ್ಮ ಕಿಚ್ಚನೂ ಒಬ್ಬರು. ಮಿಸ್ಟರ್ ಇಂಡಿಯಾ ವಿನ್ನರ್ ರೋಹಿತ್ ಖಂಡೇಲ್ ವಾಲಾ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದ್ವಿತೀಯ ಸ್ಥಾನ. ಇವರಲ್ಲದೆ, ಹಲವು ಬಾಲಿವುಡ್, ತೆಲುಗು, ತಮಿಳು ಸಿನಿಮಾದ ಹ್ಯಾಂಡ್ ಸಮ್ ಹೀರೋಗಳೆಲ್ಲಾ ಈ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ