ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪಾಕ್ ವಿರುದ್ಧ ಮಾಡಿದ್ದ ಆ ಕರಾಮತ್ತನ್ನು ಖುದ್ದು ವೀಕ್ಷಿಸಿದ್ದರಂತೆ ಕಿಚ್ಚ ಸುದೀಪ್

ಬುಧವಾರ, 7 ಆಗಸ್ಟ್ 2019 (08:47 IST)
ಬೆಂಗಳೂರು: ಕರ್ನಾಟಕದ ವೇಗಿ ವೆಂಕಟೇಶ್ ಪ್ರಸಾದ್ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಪಾಕಿಸ್ತಾನದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅವರು ಮಾಡಿದ್ದ ಬೌಲಿಂಗ್ ಕರಾಮತ್ತು.


ತಮ್ಮನ್ನು ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿ ಕಿಚಾಯಿಸಿದ ಪಾಕ್ ಬ್ಯಾಟ್ಸ್ ಮನ್ ಅಮೀರ್ ಸೊಹೈಲ್ ರನ್ನು ಮರು ಎಸೆತದಲ್ಲೇ ಬೌಲ್ಡ್ ಮಾಡಿ ಪ್ರಸಾದ್ ಕೊಟ್ಟ ತಿರುಗೇಟು ಇಂದಿಗೂ ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಹಸಿರಾಗಿದೆ.

ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡ ವೆಂಕಟೇಶ್ ಪ್ರಸಾದ್ ಗೆ ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಇದೇ ಪಂದ್ಯದ ವಿಡಿಯೋ ಪ್ರಕಟಿಸಿ ಶುಭ ಕೋರಿತ್ತು. ಆ ವಿಡಿಯೋ ನೋಡಿರುವ ಕಿಚ್ಚ ಸುದೀಪ್ ತಮ್ಮ ಹಳೆಯ ನೆನಪೊಂದನ್ನು ಮೆಲುಕುಹಾಕಿದ್ದಾರೆ.

ಆ ಪಂದ್ಯವನ್ನು ನೋಡಲು ಕಿಚ್ಚ ತಮ್ಮ ಗೆಳೆಯರ ಜತೆಗೆ ಅಲ್ಲಿ ಹಾಜರಿದ್ದರಂತೆ. ಆವತ್ತು ವೆಂಕಿ ಕೊಟ್ಟ ತಿರುಗೇಟು ಇಂದಿಗೂ ಕಿಚ್ಚನ ಮನಸ್ಸಲ್ಲಿ ಅಚ್ಚಳಿಯದೇ ನಿಂತಿದೆಯಂತೆ. ಆವತ್ತು ನೀವು ಪೆವಿಲಿಯನ್ ಎಂಡ್ ನಿಂದ ಬೌಲಿಂಗ್ ಮಾಡಿದ್ದಿರಿ. ಆ ಬೌಲಿಂಗ್ ಗೆ ನಾನು ಖುದ್ದು ಗೆಳೆಯರೊಂದಿಗೆ ಮೈದಾನದಲ್ಲಿ ಸಾಕ್ಷಿಯಾಗಿದ್ದರೆ. ಈಗಲೂ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಎಂಥಾ ತಿರುಗೇಟು ಕೊಟ್ಟಿರಿ ಸರ್ ಎಂದು ಕರ್ನಾಟಕ ವೇಗಿಗೆ ಕಿಚ್ಚ ಸುದಿಪ್ ತಡವಾಗಿ ಬರ್ತ್ ಡೇ ಶುಭಾಷಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ