ಆರ್ಟಿಕಲ್ 370 ರದ್ದು: ಕೇಂದ್ರದ ನಿರ್ಧಾರ ಕೊಂಡಾಡಿದ ಕ್ರಿಕೆಟಿಗರು

ಮಂಗಳವಾರ, 6 ಆಗಸ್ಟ್ 2019 (09:38 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಕ್ರಿಕೆಟಿಗ ಸುರೇಶ್ ರೈನಾ, ಗೌತಮ್ ಗಂಭೀರ್ ಮುಂತಾದವರು ಅಭಿನಂದಿಸಿದ್ದಾರೆ.


ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ರೈನಾ ಇದೊಂದು ಐತಿಹಾಸಿಕ ನಿರ್ಧಾರ ಎಂದು ಕೊಂಡಾಡಿದ್ದಾರೆ.  ಇವರಲ್ಲದೆ ಬಿಜೆಪಿ ಸಂಸದರೂ ಆಗಿರುವ ಗಂಭೀರ್ ಕೂಡಾ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರೈನಾ ‘ಆರ್ಟಿಕಲ್ 370 ರದ್ದು! ಇನ್ನೂ ಉತ್ತಮ ಮತ್ತು ಸುಗಮ ದಿನಗಳಿಗಾಗಿ ಎದುರ ನೋಡುತ್ತಿದ್ದೇನೆ! ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ. ಕ್ರಿಕೆಟಿಗ ಇರ್ಫಾನ್ ಪಠಾಣ್ ಪರೋಕ್ಷವಾಗಿ ಇದನ್ನು ಬೆಂಬಲಿಸಿದ್ದು, ‘ಕಾಶ್ಮೀರ ಅತ್ಯಂತ ಸುಂದರ ಪ್ರದೇಶ’ ಎಂದು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ