ಬರ್ತ್ ಡೇ ದಿನ ಅಭಿಮಾನಿಗಳಿಗೆ ಬೇಸರ: ಇನ್ಮುಂದೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದ ಕಿಚ್ಚ ಸುದೀಪ್!

ಬುಧವಾರ, 4 ಸೆಪ್ಟಂಬರ್ 2019 (08:58 IST)
ಬೆಂಗಳೂರು: ಮೊನ್ನೆಯಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡ ಕಿಚ್ಚ ಸುದೀಪ್ ಮೇಲೆ ಅಭಿಮಾನಿಗಳು ಯಾಕೋ ಬೇಸರಿಸಿಕೊಂಡಿದ್ದಾರೆ. ಅದು ಕಿಚ್ಚ ಬರ್ತ್ ಡೇ ದಿನ ನಡೆದುಕೊಂಡ ರೀತಿಗೆ.


ತಮ್ಮ ನೆಚ್ಚನ ಬರ್ತ್ ಡೇ ದಿನ ವಿಶ್ ಮಾಡಲು ಬೇರೆ ಬೇರೆ ಊರುಗಳಿಂದ ಅದೆಷ್ಟೋ ಮಂದಿ ಆಗಮಿಸಿದ್ದರು. ಆದರೆ ಇವರೆಲ್ಲರನ್ನೂ ಭೇಟಿಯಾಗಲು ಕಿಚ್ಚನಿಗೆ ಸಾಧ‍್ಯವಾಗಿರಲಿಲ್ಲ. ಹೀಗಾಗಿ ಕಿಚ್ಚನಿಗೆ ಟ್ವೀಟ್ ಮಾಡಿರುವ ಕೆಲವು ಅಭಿಮಾನಿಗಳು, ನಿಮಗೋಸ್ಕರ ದೂರದಿಂದ ಬಂದಿದ್ದೆವು. ಆದರೆ ನೀವು ಒಂದು ಫೋಟೋಗೆ, ಒಮ್ಮೆ ನೋಡಲೂ ಸಿಗಲಿಲ್ಲ. ಇದರಿಂದ ನಮಗೆ ಬೇಸರವಾಗಿದೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಎಲ್ಲರಿಗೂ ಟ್ವೀಟ್ ಮಾಡಿರುವ ಕಿಚ್ಚ, ತಮಗೆ ಬೆನ್ನು ನೋವಿದ್ದ ಕಾರಣ ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಅದಕ್ಕೆ ಕ್ಷಮೆ ಕೇಳುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿಯಲ್ಲಿ ಎಷ್ಟು ಜನರನ್ನು ಸಾಧ್ಯವೋ ಅಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸಿರುವೆ. ಸಾಧ್ಯವಾಗದೇ ಇರುವುದಕ್ಕೆ ಕ್ಷಮೆಯಿರಲಿ ಎಂದಿದ್ದಾರೆ.

ಅಷ್ಟೇ ಅಲ್ಲ, ನಿಮ್ಮ ನಡೆ ನಮಗೆ ಬೇಸರವಾಗಿದೆ. ಮುಂದಿನ ವರ್ಷ ನೀವು ಬರ್ತ್ ಡೇ ಆಚರಿಸಿಕೊಳ್ಳದೇ ಇರುವುದೇ ಒಳ್ಳೆಯದು ಎಂದವರಿಗೆ, ನಿಮಗೆ ಅದುವೇ ಸಂತೋಷವಾದರೆ ಖಂಡಿತಾ ಹಾಗೆಯೇ ಮಾಡುವೆ. ನನ್ನ ಬರ್ತ್ ಡೇ ಆಚರಿಸಲು ನೀವು ಖರ್ಚು ಮಾಡುವ ಹಣ ಒಳ್ಳೆ ಕೆಲಸಗಳಿಗೆ ಸದುಪಯೋಗವಾಗಲಿ ಎಂದು ಕಿಚ್ಚ ಬೇಸರದಿಂದಲೇ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ