ಡಿ ಬಾಸ್ ದರ್ಶನ್ ಸಿನಿಮಾ ಬಿಡುಗಡೆ ದಿನವೇ ಬಿಗ್ ನ್ಯೂಸ್ ಕೊಡಲಿದ್ದಾರೆ ಕಿಚ್ಚ ಸುದೀಪ್

ಶನಿವಾರ, 3 ಆಗಸ್ಟ್ 2019 (09:20 IST)
ಬೆಂಗಳೂರು: ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾದ ಅಡಿಯೋ ರಿಲೀಸ್ ಕಾರ್ಯಕ್ರಮ ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ಭರ್ಜರಿಯಾಗಿ ನಡೆಯಲಿದೆ.


ವಿಶೇಷವೆಂದರೆ ಇದೇ ದಿನ ಕಿಚ್ಚನ ಒಂದು ಕಾಲದ ಕುಚುಕು ಗೆಳೆಯ ಡಿ ಬಾಸ್ ದರ್ಶನ್ ಅವರ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಮೊದಲು ಇದೇ ದಿನ ಪೈಲ್ವಾನ್ ಸಿನಿಮಾವೂ ಬಿಡುಗಡೆಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಹಾಗೊಂದು ವೇಳೆ ಆಗಿದ್ದರೆ ಬಾಕ್ಸ್ ಆಫೀಸ್ ನಲ್ಲಿ ಕನ್ನಡದ ಇಬ್ಬರು ಸ್ಟಾರ್ ಗಳ ನಡುವೆ ನೀನಾ ನಾನಾ ಸ್ಪರ್ಧೆ ನಡೆಯುತ್ತಿತ್ತು. ಆದರೆ ಪೈಲ್ವಾನ್ ಬಿಡುಗಡೆ ಮುಂದಕ್ಕೆ ಹೋಗಿದ್ದರಿಂದ ಆ ಕ್ಲ್ಯಾಶ್ ನಡೆಯುತ್ತಿಲ್ಲ.

ಆದರೆ ಅದೇ ದಿನ ಪೈಲ್ವಾನ್ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿರುವುದು ವಿಶೇಷ. ಸೆಪ್ಟೆಂಬರ್ 12 ಕ್ಕೆ ಪೈಲ್ವಾನ್ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ