ನಾಳೆಯಿಂದ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಶುರು

ಮಂಗಳವಾರ, 18 ಏಪ್ರಿಲ್ 2023 (18:13 IST)
Photo Courtesy: Twitter
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದಿನಿಂದ ರಾಜಕೀಯ ಇನಿಂಗ್ಸ್ ಶುರು ಮಾಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮೇಲಿನ ಅಭಿಮಾನದಿಂದ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ.
 

ಅದರಂತೆ ಸುದೀಪ್ ನಾಳೆಯಿಂದ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಕಿಚ್ಚ ಸುದೀಪ್ ಭಾಗಿಯಾಗುವ ಸಾಧ‍್ಯತೆಯಿದೆ.

ಇಲ್ಲಿಂದಲೇ ಸುದೀಪ್ ಪ್ರಚಾರ ಕಾರ್ಯ ಶುರು ಮಾಡಲಿದ್ದಾರೆ. ಬಳಿಕ ಸಿಎಂ ಸೂಚಿಸುವ ವ್ಯಕ್ತಿಗಳ ಪರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ