ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲಿರುವ ಕಿಚ್ಚ ಸುದೀಪ್

ಬುಧವಾರ, 13 ಅಕ್ಟೋಬರ್ 2021 (10:28 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ. ಈ ಮೊದಲು ಸ‍ಲ್ಲು ನಾಯಕಾರಿಗಿದ್ದ ಸಿನಿಮಾದಲ್ಲಿ ಸುದೀಪ್ ವಿಲನ್ ಆಗಿ ಅಭಿನಯಿಸಿದ್ದರು.


ಇದೀಗ ಸಲ್ಮಾನ್ ಖಾನ್ ಗಾಗಿ ಕಥೆಯೊಂದನ್ನು ರೆಡಿ ಮಾಡಿಕೊಂಡಿರುವ ಕಿಚ್ಚ ಸುದೀಪ್ ಮುಂದೆ ಅವರಿಗೆ ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಕೋಟಿಗೊಬ್ಬ 3 ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಈ ಸಿಹಿ ಸುದ್ದಿ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಕತೆಯೊಂದನ್ನು ಸುದೀಪ್ ರೆಡಿ ಮಾಡಿಕೊಂಡಿದ್ದು, ಹಿಂದಿಯಲ್ಲಿ ನಟಿಸುವಂತೆ ಸಲ್ಮಾನ್ ಗೆ ಕೇಳಿಕೊಂಡಿದ್ದಾರಂತೆ. ಈ ಕತೆ ಸಲ್ಲು ಭಾಯ್ ಗೆ ಒಪ್ಪುತ್ತೆ ಎನ್ನುವುದು ಅವರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ