ರಾಜ್ಯೋತ್ಸವಕ್ಕೆ ಯುವರಾಜಕುಮಾರ್ ಹೊಸ ಸಿನಿಮಾ ವಿಡಿಯೋ ಲಾಂಚ್
ಶನಿವಾರ, 24 ಅಕ್ಟೋಬರ್ 2020 (10:49 IST)
ಬೆಂಗಳೂರು: ಡಾ.ರಾಜ್ ಮೊಮ್ಮಗ ಯುವರಾಜಕುಮಾರ್ ಅಭಿನಯಿಸುತ್ತಿರುವ ಯುವ01 ಸಿನಿಮಾದ ವಿಡಿಯೋ ಒಂದು ರಾಜ್ಯೋತ್ಸವದಂದು ಲಾಂಚ್ ಆಗಲಿದೆ.
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಯುವರಾಜ್ ರಗಡ್ ಲುಕ್ ಎಲ್ಲರಿಗೂ ಇಷ್ಟವಾಗಿತ್ತು. ರಾಜ್ ಕುಟುಂಬದ ಕುಡಿ ಭರವಸೆ ಮೂಡಿಸುವಂತಿದ್ದರು. ಈ ಸಿನಿಮಾಗಾಗಿ ಯುವರಾಜ್ ಸಾಕಷ್ಟು ವರ್ಕೌಟ್ ಮಾಡಿ ರೆಡಿಯಾಗಿದ್ದಾರೆ. ಇದೀಗ ಮೇಕಿಂಗ್ ವಿಡಿಯೋ ಒಂದನ್ನು ಲಾಂಚ್ ಮಾಡಲಾಗುತ್ತಿದೆ. ಇದರಲ್ಲಿ ಚಿತ್ರಕ್ಕಾಗಿ ಅವರು ಪಟ್ಟ ಶ್ರಮವೆಷ್ಟು ಎಂಬುದು ಅನಾವರಣಗೊಳ್ಳಲಿದೆ.