ಅಭಿಮಾನಿಯ ಮಾತಿನಿಂದ ಕಿಚ್ಚ ಸುದೀಪ್ ಗೆ ಬೇಸರ

ಮಂಗಳವಾರ, 13 ಆಗಸ್ಟ್ 2019 (09:45 IST)
ಬೆಂಗಳೂರು: ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಸ್ಯಾಂಡಲ್ ವುಡ್ ತಾರೆಯ ಸಾಕಷ್ಟು ಸಹಾಯ ಮಾಡುತ್ತಿದ್ದರೂ ವಿನಾಕಾರಣ ಆರೋಪ ಮಾಡಿದ ಅಭಿಮಾನಿಯ ಮಾತಿನಿಂದ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.


ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಗೆ ಟ್ವೀಟ್ ಮಾಡಿ ನೀವು ಉತ್ತರ ಕರ್ನಾಟಕ ಜನರಿಗೆ ಯಾವುದೇ ರೀತಿ ಸ್ಪಂದಿಸದೇ ಇದ್ದಿದ್ದು ನೋಡಿ ನನಗೆ ಬೇಸರವಾಗಿದೆ. ಇನ್ನು ಮುಂದೆ ಯಾವುದೇ ಕನ್ನಡ ಸಿನಿಮಾ ನೋಡಲ್ಲ ಸರ್. ಉತ್ತರ ಕರ್ನಾಟಕ ಜನರಿಗೆ ಆರ್ಥಿಕ ಬೆಂಬಲ ಬೇಕು. ಆದರೆ ನೀವು ಯಾರೂ ನೆರವು ನೀಡಿಲ್ಲ ಎಂದು ಆರೋಪಿಸಿದ್ದರು.

ಇದು ಕಿಚ್ಚನಿಗೆ ತೀವ್ರ ಬೇಸರವುಂಟುಮಾಡಿದೆ. ನಿಮಗೆ ಬಹುಶಃ ಗೊತ್ತಿಲ್ಲ, ನಾನೂ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಉತ್ತರ ಕರ್ನಾಟಕ ನೆರೆ ಪೀಡಿತರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಹಲವರು ಹೃದಯಪೂರ್ವಕವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಿದ್ದರೂ ನೀವು ಈ ರೀತಿ ಆರೋಪ ಮಾಡಿರುವುದು, ಕಣ್ಣು ತೆರೆಯದೇ ಮಾತನಾಡುವುದು ನಿಜಕ್ಕೂ ಬೇಸರವುಂಟುಮಾಡುತ್ತದೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ