ಮಗುವಿನ ಹಾಡಿಗೆ ಕರಗಿತು ಕಿಚ್ಚ ಸುದೀಪ್ ಹೃದಯ
ಈ ವಿಡಿಯೋವನ್ನು ಕಿಚ್ಚನಿಗೆ ಅಭಿಮಾನಿಗಳು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಸ್ವತಃ ಸುದೀಪ್ ಹೃದಯ ಕರಗಿದ್ದು, ಖಂಡಿತಾ ಈ ಮಗುವನ್ನು ಒಂದು ಸಾರಿ ಭೇಟಿಯಾಗುವೆ. ಈ ಮಗು ಎಲ್ಲಿದೆ ಎಂದು ತಿಳಿಸಿ ಎಂದು ಕೇಳಿದ್ದಾರೆ. ಕಿಚ್ಚನ ಹೃದಯವಂತಿಕೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.