ರವಿಚಂದ್ರನ್ ನೋಡಿ ಪತ್ನಿ ಕಣ್ಣೀರು ಹಾಕಿದ ಆ ಒಂದು ಘಟನೆ!
ಆಗ ರಣಧೀರ ಚಿತ್ರದ ಬಾ ಬಾರೋ ಬಾರೋ ರಣಧೀರ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ರವಿಚಂದ್ರನ್ ಗೆ ಮದುವೆಯಾಗಿ 15 ದಿನ ಆಗಿತ್ತಷ್ಟೇ. ಗಂಡನ ಕಾಣಲು ಸೆಟ್ ಗೆ ಬಂದಿದ್ದ ರವಿಚಂದ್ರನ್ ಹೆಂಡತಿ ಅವರನ್ನು ನೋಡಿ ಕಣ್ಣೀರು ಹಾಕಿದರಂತೆ. ಆಗ ರವಿಚಂದ್ರನ್ ಹೆಂಡತಿಯನ್ನು ಸಂತೈಸಿದ್ದರು. ಅವರನ್ನು ನೋಡುತ್ತಿದ್ದ ನನಗೆ ನನ್ನ ಹೆಂಡತಿ ಮತ್ತು 6 ತಿಂಗಳ ಮಗ ಗುರು ನೆನಪಿಗೆ ಬಂದರು ಎಂದು ಜಗ್ಗೇಶ್ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.