ಬೆಂಗಳೂರು: ಬಿಗ್‌ಬಾಸ್ ಸೀಸನ್ 11 ಹಲವು ಕಾರಣಗಳಿಂದ ವಿಶೇಷವಾಗಿತ್ತು. ವಿಭಿನ್ನ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಬಿಗ್‌ಬಾಸ್ ಸೀಸನ್ 11ರ ಟಿಆರ್‌ಪಿಯನ್ನು ಟಾಪ್‌ನಲ್ಲಿ ಇಟ್ಟಿತ್ತು. ಸೀಸನ್ ಆರಂಭದಿಂದಲೂ ಸದ್ದು ಮಾಡಿದ್ದ ಉಗ್ರಂ ಮಂಜು 5ನೇ ರನ್ನರ್ ಅಪ್ ಆಗಿ ದೊಡ್ಮನೆಯಿಂದ ಹೊರಬಂದಿದ್ದರು.
ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ 4ನೇ ರನ್ನರ್ ಅಪ್ ಆಗಿರುವ ಬಗ್ಗೆ ಉಗ್ರಂ ಮಂಜು ಖುಷಿ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ತನಗೆ ಸಿಕ್ಕ ಬಹುಮಾನಗಳನ್ನೆಲ್ಲ ದಾನ ಮಾಡಲು ಹೊರಟ ಉಗ್ರಂ ಮಂಜುಗೆ ಕಿಚ್ಚ ಸುದೀಪ್ ಬುದ್ದಿ ಹೇಳಿದ್ದಾರೆ.
ತನಗೆ ಬಂದ 2 ಗಿಫ್ಟ್ ಅನ್ನು ಯಾರಿಗಾದರೂ ನೀಡಿ ಎಂದು ಉಗ್ರಂ ಮಂಜು ಹೇಳಿದರು. ಮೂರನೇ ಬಹುಮಾನವನ್ನು ಊರಿನಲ್ಲಿರುವ ರೈತರಿಗೆ ನೀಡುವುದಾಗಿ ಉಗ್ರಂ ಮಂಜು ಹೇಳಿದಾಗ, ನಿನ್ನ ಅಪ್ಪ ಕೂಡಾ ರೈತರು, ಅವರಿಗೂ ನೀಡು. ಫಸ್ಟ್ ನಿನ್ನ ತಂದೆ ತಾಯಿಗೆ ನೀಡು, ಆಮೇಲೆ ಅವರು ನಿರ್ಧಾರ ಮಾಡಲಿ.
ದಾನ ಧರ್ಮ ಮಾಡಬೇಕು, ಅತೀಯಾಗಿ ಅಲ್ಲ ಎಂದು ಕಿವಿ ಹಿಂಡಿದ್ದಾರೆ.