ಹನುಮಂತು ಪ್ರೀತಿಗೆ ಸೇತುವೆಯಾದ ಸುದೀಪ್‌, ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಆಗಿದ್ದಾದರೇನು

Sampriya

ಭಾನುವಾರ, 26 ಜನವರಿ 2025 (13:13 IST)
Photo Courtesy X
ಬಿಗ್‌ಬಾಸ್ ಮನೆಯಲ್ಲಿ ತಾನೊಂದು ಹುಡುಕಿಯನ್ನು ಪ್ರೀತಿಸುತ್ತಿರುವ ವಿಚಾರ ಗಾಯಕ ಹನುಮಂತು ಈಗಾಗಲೇ ಹೇಳಿಕೊಂಡಿದ್ದಾನೆ. ಅದಲ್ಲದೆ ದೊಡ್ಮನೆಯಲ್ಲಿ ಹುಡುಗಿ ನೆನಪಲ್ಲೇ ಅದೇಷ್ಟೋ ಹಾಡುಗಳನ್ನು ಹಾಡಿದ್ದಾನೆ.

ಹುಡುಗಿಯ ನೆಪದಲ್ಲಿ ಹನುಮಂತುವನ್ನು ಇತರ ಸ್ಪರ್ಧಿಗಳು ಗೋಳಾಡಿಸಿದ್ದು ಉಂಟು. ಫ್ಯಾಮಿಲಿ ರೌಂಡ್ ವೇಳೆ ತನ್ನ ಮನೆಯವರ ಮುಂದೆ ಹನಮಂತು ಪ್ರೀತಿ ವಿಚಾರವನ್ನು ರಜತ್ ಕೇಳಿದ್ದರು. ಈ ವೇಳೆ ಹನಮಂತು ತಾಯಿ ತನ್ನ ಮನೆಗೆ ಸೊಸೆಯಾಗಿ ಬರುವವಳು ಹೇಗಿರಬೇಕೆಂದು ಹೇಳಿದ್ದರು.

ಅದಲ್ಲದೆ ನಮ್ಮ ಮನೆತನಕ್ಕೆ ಹೊಂದುವ ಹುಡುಗಿಯನ್ನುಮಾತ್ರ ನಾವು ಸೊಸೆಯನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದ್ದರು. ಹನಮಂತು ಇದಕ್ಕೆ ಹಾಗೇನಿಲ್ಲ ಎಂದು ಹೇಳಿದ್ದ. ಅದಕ್ಕೆ ಅವರ ತಾಯಿ ಹಾಗೋ ಅಲ್ಲ, ಹೀಗೋ ಇಲ್ಲ ಎಂದು ಕೌಂಟರ್ ನೀಡಿದ್ದರು.

ಇದೀಗ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಅವರು ಹನುಮಂತನ ತಾಯಿ ಬಳಿ ಮಗನ ಮದುವೆ ಬಗ್ಗೆ ಕೇಳಿದ್ದಾರೆ. ಹುಡುಕಿ ನೋಡಿದ್ಮೇಲೆ ಮಾಡ್ತೀವಿ ಎಂದರು. ಅದಕ್ಕೆ ಸುದೀಪ್ ಅವರು ಹನುಮಂತು ಈಗಾಗಲೇ ಹುಡುಗಿಯನ್ನು ನೋಡಿದ್ದಾನೆ ಎಂದಿದ್ದಾರೆ.

ನಾವು ನೋಡಿಲ್ವಲ್ಲ ಎಂದು ಹನುಮಂತು ತಾಯಿ ಹೇಳಿದರು. ಹೀಗೇ ಆದ್ರೆ ಹನುಮಂತು ಹುಡುಗನನ್ನು ಕರೆದುಕೊಂಡು ಬರುತ್ತಾನೆ ಎಂದು ರೇಗಿಸಿದ್ದಾರೆ.  ಒಪ್ತಿರಾ ಇಲ್ವ ಎಂದಿದ್ದಕ್ಕೆ , ನೀವು ಓಕೆ ಅಂದ್ರೆ ನಮ್ಗೂ ಒಕೆ ಅಂತಾ ಹನುಮಂತು ಪ್ರೀತಿಗೆ ತಾಯಿ ಒಪ್ಪಿಗೆ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ