ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಭಾವುಕ ಸಂದೇಶ

ಶನಿವಾರ, 30 ಮೇ 2020 (09:18 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇಂದು ಜನ್ಮದಿನದ ಸಂಭ್ರಮ. ರವಿಮಾಮನ ಬರ್ತ್ ಡೇಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರವಿಚಂದ್ರನ್ ಬಗ್ಗೆ ಬರೆದುಕೊಂಡಿರುವ ಕಿಚ್ಚ ಸುದೀಪ್ ಅವರು ತನಗೆ ಸ್ಪೂರ್ತಿ ಎಂದಿದ್ದಾರೆ. ಜತೆಗೆ ಮಾಣಿಕ್ಯ ಸಿನಿಮಾದ ನೃತ್ಯದ ತುಣುಕಿನ ವಿಡಿಯೋವೊಂದನ್ನು ಪ್ರಕಟಿಸಿ ಶುಭಹಾರೈಸಿದ್ದಾರೆ.

‘ನಿಮ್ಮ ರಂಗದಲ್ಲಿದ್ದೇನೆ ಮತ್ತು ನಿಮ್ಮ ಜತೆಗೆ ನಿಮ್ಮ ಯಶಸ್ಸನ್ನು ನೋಡಿದ್ದೇನೆ ಎನ್ನುವುದೇ ನನಗೆ ಗೌರವದ ವಿಷಯ ಅಣ್ಣ. ನೀವು ಯಾವತ್ತೂ ನನಗೆ ಸ್ಪೂರ್ತಿ. ಹ್ಯಾಪೀ ಬರ್ತ್ ಡೇ ಅಣ್ಣ’ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ