ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ ಗ್ಯಾರಂಟಿ!

ಶುಕ್ರವಾರ, 29 ಮೇ 2020 (08:47 IST)
ಬೆಂಗಳೂರು: ರಾಜ್ಯ ಸರ್ಕಾರ ಥಿಯೇಟರ್ ತೆರೆಯಲು ಅನುಮತಿ ನೀಡುವುದನ್ನೇ ಚಿತ್ರರಂಗ ಕಾಯುತ್ತಿದೆ. ಈ ಬಗ್ಗೆ ಈಗ ರಾಜ್ಯ  ಸರ್ಕಾರವೂ ಒಲವು ತೋರಿರುವುದು ಸಿನಿಮಾ ರಸಿಕರಿಗೆ ಸಿಹಿ ಸುದ್ದಿ ಸಿಗುವ ಲಕ್ಷಣವಿದೆ.


ಆದರೆ ಥಿಯೇಟರ್ ತೆರೆಯಲು ಅನುಮತಿ ನೀಡುವುದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಶುರುವಾಗುವುದು ಗ್ಯಾರಂಟಿಯಾಗಿದೆ. ಯಾಕೆಂದರೆ ಸ್ಯಾಂಡಲ್ ವುಡ್ ನ ಎಲ್ಲಾ ಘಟಾನುಘಟಿ ನಾಯಕರ ಸಿನಿಮಾಗಳು ಈಗ ಬಿಡುಗಡೆಗೆ ಕಾದು ಕುಳಿತಿವೆ.

ಪುನೀತ್ ರಾಜ್ ಕುಮಾರ್ ಅವರ ‘ಯುವರತ್ನ’, ದರ್ಶನ್ ಅವರ ‘ರಾಬರ್ಟ್’, ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ 3’ ಈಗ ಬಿಡುಗಡೆ ಕಾದಿರುವ ಬಿಸಿ ಬಿಸಿ ಸಿನಿಮಾಗಳು. ಆಗಾಗ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರವಾಗಿ ಕಿತ್ತಾಟ ನಡೆಸುತ್ತಿರುತ್ತಾರೆ.

ಥಿಯೇಟರ್ ಓಪನ್ ಆದ ಕೂಡಲೇ ಈಗ ಈ ಸ್ಟಾರ್ ನಟರ ನಿರ್ಮಾಪಕರಿಗೂ ಒಬ್ಬರಿಗೊಬ್ಬರು ಕ್ಲ್ಯಾಶ್ ಆಗದಂತೆ ಸಿನಿಮಾ ಬಿಡುಗಡೆ ಮಾಡುವ ತಲೆನೋವು ಶುರುವಾಗಲಿದೆ. ಜತೆಗೆ ತಮ್ಮ ನೆಚ್ಚಿನ ನಟನ ಸಿನಿಮಾವೇ ದಾಖಲೆ ಮಾಡಿರುವುದು ಎಂದು ಆಯಾ ಸ್ಟಾರ್ ನಟರ ಅಭಿಮಾನಿಗಳು ಕೆಸರೆರಚಾಟ ಮಾಡುವುದಂತೂ ಗ್ಯಾರಂಟಿಯಾಗಿದೆ. ಇದರ ನಡುವೆ ಹೊಸಬರ ಸಿನಿಮಾಗಳನ್ನು ಕೇಳುವವರು ಯಾರೋ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ