ರೆಬಲ್ ಸ್ಟಾರ್ ಅಂಬರೀಶ್ ಬರ್ತ್ ಡೇಗೆ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಹೊಸ ಸಿನಿಮಾ ಲುಕ್

ಶುಕ್ರವಾರ, 29 ಮೇ 2020 (09:11 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನದಂದು ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಮುಂದಿನ ಚಿತ್ರ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.


ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಭಿನಯಿಸಲಿರುವ ಹೊಸ ಸಿನಿಮಾ ಇದಾಗಿದ್ದು, ಕೈಯಲ್ಲಿ ಗನ್ ಹಿಡಿದಿರುವ ಅಭಿಷೇಕ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಇಂದು ಚಿತ್ರದ ವಿಡಿಯೋ ಫಸ್ಟ್ ಲುಕ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ.

ಮೊದಲ ಸಿನಿಮಾ ‘ಅಮರ್’ ನಲ್ಲಿ ಅಭಿಷೇಕ್ ಗಮನ ಸೆಳೆದಿದ್ದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಈಗ ಈ ಸಿನಿಮಾ ಮೂಲಕವಾದರೂ ಬ್ರೇಕ್ ಪಡೆಯುವ ನಿರೀಕ್ಷೆಯಲ್ಲಿ ಅಭಿಷೇಕ್ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ