ಅಮ್ಮನ ಜೊತೆ ಕೂತು ಬಿಗ್ ಬಾಸ್ ಶೋ ನೋಡಲ್ವಂತೆ ಕಿಚ್ಚ ಸುದೀಪ್

ಶುಕ್ರವಾರ, 26 ಫೆಬ್ರವರಿ 2021 (10:32 IST)
ಬೆಂಗಳೂರು: ಕಿಚ್ಚ ಸುದೀಪ್ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಇಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರೂ ಒಂದು ದಿನವೂ ತಮ್ಮ ಅಮ್ಮ ಅಥವಾ ಕುಟುಂಬದವರ ಜೊತೆ ಕೂತು ಶೋ ನೋಡಲ್ವಂತೆ. ಅದಕ್ಕೆ ಕಾರಣವನ್ನೂ ಅವರು ಹೇಳಿದ್ದಾರೆ.


ಬಿಗ್ ಬಾಸ್ ನಲ್ಲಿ ನಿಮ್ಮ ಫೇವರಿಟ್ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, ‘ನನಗೆ ವೈಯಕ್ತಿಕವಾಗಿ ಯಾರೂ ಮೆಚ್ಚಿನ ಸ್ಪರ್ಧಿ ಅಂತಿಲ್ಲ. ನಾನು ಆ ರೀತಿ ಪಕ್ಷಪಾತಿಯಾಗಲು ಸಾಧ‍್ಯವಿಲ್ಲ. ಅಷ್ಟೇ ಏಕೆ? ನಾನು ನನ್ನ ತಾಯಿಯ ಜೊತೆ ಕೂತುಕೊಂಡೂ ಈ ಶೋ ನೋಡಲ್ಲ. ಯಾಕೆಂದರೆ ಅವರು ಯಾರಾದರೂ ಸ್ಪರ್ಧಿ ಬಗ್ಗೆ ಅನುಕಂಪ, ಮೆಚ್ಚುಗೆ ಸೂಚಿಸಿದರೆ, ಶೋನಲ್ಲಿ ಮಾತುಕತೆಯಾಗುವಾಗ ಆ ವ್ಯಕ್ತಿಗೆ ಏನಾದರೂ ಹೇಳುವಾಗ ನನಗೆ ತಾಯಿ ಆ ವ್ಯಕ್ತಿಯ ಬಗ್ಗೆ ಹೇಳಿದ ಒಳ್ಳೆಯ ಮಾತುಗಳು ನೆನಪಾಗುತ್ತವೆ. ಆಗ ನನಗೆ ನನ್ನ ನಿಜವಾದ ಅಭಿಪ್ರಾಯ ಹೇಳಲು ಸಾಧ‍್ಯವಾಗುವುದಿಲ್ಲ. ನಾನು, ಪರಂ (ಪರಮೇಶ್ವರ್ ಗುಂಡ್ಕಲ್) ಮಾತ್ರ ಕೂತು ಈ ಶೋ ವೀಕ್ಷಿಸುತ್ತೇವೆ’ ಎಂದು ಸುದೀಪ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ