ಕಿಚ್ಚ47 ಸಿನಿಮಾ ಘೋಷಣೆ: ಮತ್ತೆ ತಮಿಳು ನಿರ್ದೇಶಕರ ಜೊತೆ ಸಿನಿಮಾ

ಶನಿವಾರ, 2 ಸೆಪ್ಟಂಬರ್ 2023 (18:47 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಸುದೀಪ್ ಹುಟ್ಟುಹಬ್ಬದ ನಿಮಿತ್ತ ಇಂದು ಕಿಚ್ಚ47 ಸಿನಿಮಾ ಘೋಷಣೆಯಾಗಿದೆ.

ಕಿಚ್ಚ46 ಸಿನಿಮಾ ಕೂಡಾ ಸುದೀಪ್ ತಮಿಳು ನಿರ್ಮಾಣ ಸಂಸ್ಥೆಯೊಂದಿಗೆ ಮಾಡುತ್ತಿದ್ದಾರೆ. ಇದೀಗ ಕಿಚ್ಚ47 ಗೂ ತಮಿಳು ನಿರ್ದೇಶಕರ ಸಾರಥ್ಯವಿದೆ.

ಖ್ಯಾತ ನಿರ್ದೇಶಕ ಚೇರನ್ ಕಿಚ್ಚ47 ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಪೋಸ್ಟರ್ ನೋಡಿದರೆ ಇದೂ ಕೂಡಾ ಸಖತ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ