ಬರ್ತಡೇ ದಿನ ಅಭಿಮಾನಿಗಳಿಗೆ ಡಬಲ್ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್

Sampriya

ಸೋಮವಾರ, 2 ಸೆಪ್ಟಂಬರ್ 2024 (17:59 IST)
Photo Courtesy X
ಬೆಂಗಳೂರು: 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿದ ನಟ ಸುದೀಪ್ ಅವರು ಬರ್ತಡೇ ದಿನವೇ ತನ್ನ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದ್ದಾರೆ. ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್‌  ಸಿನಿಮಾದ ಬಿಡುಗಡೆ ದಿನಾಂಕವನ್ನು ಗಣೇಶ ಚತುರ್ಥಿಯಂದ ಘೋಷಿಸುವುದಾಗಿ ಹೇಳಿದ್ದಾರೆ.

ಇನ್ನೂ ಇಂದು ಅವರ ನಟನೆಯ ಹೊಸ ಸಿನಿಮಾ 'ಮ್ಯಾಕ್ಸ್‌'ನ ಟೈಟಲ್‌ ಟ್ರ್ಯಾಕ್‌ 'ಮ್ಯಾಕ್ಸಿಮಮ್‌ ಮಾಸ್‌' ಬಿಡುಗಡೆಯಾಗಿದೆ.

ಈ ಸಿನಿಮಾಗೆ ವಿಜಯ್‌ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅದಲ್ಲದೆ ಅನೂಪ್‌ ಭಂಡಾರಿ ನಿರ್ದೇಶನದ ಹೊಸ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದೆ. 'ಬಿಲ್ಲಾ ರಂಗ ಬಾಷಾ' ಸಿನಿಮಾವನ್ನು ತೆಲುಗಿನ ಹಿಟ್‌ ಸಿನಿಮಾ 'ಹನುಮಾನ್‌' ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೇನ್ಮೆಂಟ್‌ ಸಂಸ್ಥೆಯೇ ನಿರ್ಮಾಣ ಮಾಡಲಿದೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.

ಮ್ಯಾಕ್ಸಿಮಮ್‌ ಮಾಸ್‌ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ. ಬಿಜ್ಜು ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮ್ಯಾಕ್ಸ್‌' ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ