ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು.
ಆದರೆ ಈ ಸಿನಿಮಾದ ಹಾಡೊಂದು ಈಗ ಕೊರಿಯನ್ ಹಾಡುಗಾರ್ತಿಯ ಬಾಯಲ್ಲಿ ಮೂಡಿಬಂದಿದೆ. ಕೊರಿಯಾ ಮೂಲದ ಯುವತಿಯೊಬ್ಬಳು ಯುವರತ್ನ ಸಿನಿಮಾದ ನೀನಾದೆ ನಾ ಎಂಬ ಹಾಡನ್ನು ಹಾಡುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಮೂಲಕ ನಮ್ಮ ಕನ್ನಡದ ಹಾಡೊಂದು ಅದೂ ಪ್ರೇಮ ಗೀತೆಯೊಂದು ವಿದೇಶೀ ಯುವತಿಯ ಬಾಯಲ್ಲಿ ಕೇಳುತ್ತಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.