ಲಕ್ಷ್ಮೀ ಬಾರಮ್ಮಾ ಸೀರಿಯಲ್ ಆಲ್ಬಂ ಹಾಡಿನ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ
ಧಾರವಾಹಿಯಲ್ಲಿ ನಾಯಕ ವೈಷ್ಣವ್ ಗಾಯಕ. ತನ್ನ ಪತ್ನಿ ಲಕ್ಷ್ಮೀ ಬರೆದ ಹಾಡಿಗೆ ಆತ ರಾಗ ಸಂಯೋಜಿಸಿ, ಹಾಡಿ ಪತ್ನಿಯ ಜೊತೆಗೇ ಹೆಜ್ಜೆ ಹಾಕುವ ಆಲ್ಬಂ ಹಾಡನ್ನು ಬಿಡುಗಡೆ ಮಾಡುವ ಸನ್ನಿವೇಶ ಸೃಷ್ಟಿಸಲಾಗಿತ್ತು.
ಈ ಧಾರವಾಹಿಯಲ್ಲಿ ಗಾಯಕ ಬ್ರೋ ಗೌಡ ಶಮಂತ್ ನಾಯಕನ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ಅವರೇ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿರುವಂತೆ ಸುಂದರ ಸೆಟ್ ನಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಾಡು ರೊಮ್ಯಾಂಟಿಕ್ ಮೆಲೊಡಿ ಆಗಿದ್ದು, ಈಗಾಗಲೇ ಸಿನಿಮಾ ಹಾಡಿನ ರೇಂಜ್ ಗೆ ವೈರಲ್ ಆಗಿದೆ.
ಸುಮಧುರವಾಗಿ ಮೂಡಿಬಂದಿರುವ ಈ ಹಾಡು ವೈರಲ್ ಆಗಿದ್ದು, ಆ ಹಾಡನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ. ಅದರ ಲಿಂಕ್ ಇಲ್ಲಿದೆ ನೋಡಿ: