ಲಕ್ಷ್ಮೀ ಬಾರಮ್ಮಾ ಧಾರವಾಹಿಯಿಂದ ಹೊರಬಂದಿರುವ ಬಗ್ಗೆ ಸ್ಪಷ್ಟನೆ ನೀಡಿದ ನಟಿ ತನ್ವಿ ರಾವ್
ತನ್ವಿ ರಾವ್ ಮೂಲತಃ ಡ್ಯಾನ್ಸರ್. ರಾಧೆ ಶ್ಯಾಮ ಧಾರವಾಹಿಯ ನಾಯಕಿಯಾಗಿದ್ದರು. ಬಳಿಕ ಈಗ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಕೀರ್ತಿ ಪಾತ್ರ ಮಾಡುತ್ತಿದ್ದರು. ಈ ಪಾತ್ರದ ಮೂಲಕ ಅವರು ಜನರಿಗೆ ಇಷ್ಟವಗಿದ್ದರು. ಆದರೆ ಕೆಲವು ದಿನಗಳಿಂದ ಅವರು ಧಾರವಾಹಿಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿ ಪ್ರೇಕ್ಷಕರಿಗೆ ನಿರಾಸೆ ತಂದಿತ್ತು.
ಆದರೆ ಈಗ ಅವರೇ ಸ್ಪಷ್ಟನೆ ನೀಡಿದ್ದು, ನಾನು ಧಾರವಾಹಿಯಿಂದ ಹೊರಬಂದಿಲ್ಲ. ನಾನು ಲಕ್ಷ್ಮೀ ಬಾರಮ್ಮಾ ಧಾರವಾಹಿಯನ್ನು ಬಿಡಲಿದ್ದೇನೆ ಎಂಬ ವದಂತಿ ಕೇಳ್ಪಟ್ಟೆ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಥವಾ ವೆಬ್ ಸೈಟ್ ಮೂಲಕ ತಿಳಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಧನ್ಯವಾದಗಳು. ಮುಂದೆ ಕೂಡಾ ಧಾರವಾಹಿಗೆ ಇದೇ ರೀತಿ ಪ್ರೋತ್ಸಾಹವಿರಲಿ ಎಂದು ಹೇಳಿದ್ದಾರೆ. ಆ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.