ಲಾಕ್ ಡೌನ್ ಇಫೆಕ್ಟ್: ಸ್ಟಾರ್ ಸುವರ್ಣದಲ್ಲಿ ಡಬ್ಬಿಂಗ್ ಧಾರವಾಹಿಗಳ ಪ್ರದರ್ಶನ

ಶನಿವಾರ, 4 ಏಪ್ರಿಲ್ 2020 (10:35 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಿರುತೆರೆ ಕೂಡಾ ಚಿತ್ರೀಕರಣ ನಿಲ್ಲಿಸಿದೆ. ಹೀಗಾಗಿ ಇದೀಹ ಹೊಸ ಎಪಿಸೋಡ್ ಗಳು ಮುಕ್ತಾಯವಾಗಿದ್ದು, ಇನ್ನು ಮುಂದಿನ ಎಪಿಸೋಡ್ ಪ್ರಸಾರ ಮಾಡಲು ಚಿತ್ರೀಕರಣ ನಡೆಯಬೇಕಷ್ಟೇ.


ಹೀಗಾಗಿ ಸ್ಟಾರ್ ಸುವರ್ಣ ಇದೀಗ ಹಿಂದಿಯ ಜನಪ್ರಿಯ ಎರಡು ಧಾರವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಲು ತೀರ್ಮಾನಿಸಿದೆ. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ‘ಮಹಾಭಾರತ’ ಮತ್ತು ‘ನಝರ್’ (ಕನ್ನಡದಲ್ಲಿ ದೃಷ್ಟಿ) ಎಂಬ ಹಿಂದಿ ಧಾರವಾಹಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡಲಿದೆ.

ಏಪ್ರಿಲ್ 13 ರಿಂದ ಅಂದರೆ ಮುಂದಿನ ವಾರದಿಂದ ಈ ಎರಡೂ ಧಾರವಾಹಿಗಳು ಕನ್ನಡದಲ್ಲಿ ಪ್ರಸಾರವಾಗಲಿದೆ. ಮಹಾಭಾರತ ಪೌರಾಣಿಕ ಧಾರವಾಹಿ ರಾತ್ರಿ 9 ಗಂಟೆಗೆ ಮತ್ತು ನಝರ್ ಕನ್ನಡ ಅವತರಣಿಕೆ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ