ನವಿರಾದ ಪ್ರೇಮಕಥೆಯ 'ಲವ್ ಮಾಕ್ಟೈಲ್'

ಶುಕ್ರವಾರ, 31 ಜನವರಿ 2020 (14:11 IST)
ಸ್ಯಾಂಡಲ್ ವುಡ್ ನಲ್ಲಿ ಸಿನಿಪ್ರಿಯರಿಗಾಗಿ ಈ ಮಂತ್ ಎಂಡ್ ನ  ಎಂಜಾಯ್ ಮಾಡೋಕೆ ಬ್ಯೂಟಿಫುಲ್ ಲವ್ ಸ್ಟೋರಿನ ಹೊತ್ತು ಸಿನ್ಮಾವೊಂದು ಬರೋಕೆ ರೆಡಿಯಾಗಿದೆ. ಅಟ್ಯಾಕ್ಟೀವ್ ಎನಿಸೋ 'ಲವ್ ಮಾಕ್ಟೈಲ್' ಎಂಬ ಟೈಟಲ್ ನೊಂದಿಗೆ ನವಿರಾದ ಪ್ರೇಮಕಥೆ ಹೇಳಲಿರೋ ಈ ಚಿತ್ರಕ್ಕೆ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗಾರಾಜ್ ನಾಯಕ-ನಾಯಕಿ.
 ಡಾರ್ಲಿಂಗ್ ಕೃಷ್ಣ ನಟಿಸಿ ಡೈರೆಕ್ಟ್ ಮಾಡ್ತಿರೋ ಸಿನಿಮಾವೆಂಬುದು ವಿಶೇಷ.ಇಷ್ಟು ದಿನ ನಟನಾಗಿ ಮಿಂಚಿದ್ದ ಕೃಷ್ಣ ಲವ್ ಮಾಕ್ಟೈಲ್ ಮೂಲಕ ನಿರ್ದೇಶನದ ಜೊತೆ ನಟಿಸಿ ನಿರ್ಮಾಪಕನಾಗಿ ಬಡ್ತಿ ಪಡಿತ್ತಿದ್ದಾರೆ.ಇವರಿಗೆ ಸಾಥ್ ನೀಡಿ ನಟಿ ಮಿಲನ ನಾಗಾರಾಜ್ ಸಹ ಬಂಡವಾಳ ಹೊಡಿದ್ದಾರಂತೆ.. 
 
ಈಗಾಗಲೇ ರಿಲೀಸ್ ಆಗಿರೋ ಟ್ರೈಲರ್ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಟ್ರೈಲರ್ ನಲ್ಲಿ ಕಿಚ್ಚನ ಧ್ವನಿಯಲ್ಲಿ ಕೇಳಿದ್ದ ಸಿನಿಪ್ರಿಯ ಖುಷ್ ಹುವಾ ಅಂದಿದ್ದ.ತದ ನಂತ್ರ ಹಾಡುಗಳ ಲೋಕಾರ್ಪಣೆಯೂ ಆಗಿ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮೋಡಿ ಮಾಡ್ತಿದೆ. ಹೀಗೆ ಸಿನ್ಮಾದ ನಿರೀಕ್ಷೆ ದುಪ್ಪಾಟ್ಟಾಗಿಸಿಕೊಂಡಿದ್ದ ಚಿತ್ರವೀಗ ಇದೇ ಜನವರಿ 31 ಕ್ಕೆ ತೆರೆಮೇಲೆ ಬರೋಕೆ ಸಜ್ಜಾಗಿದೆ.
ಹಾರಾರ್,ಕ್ರೈಂ,ಥ್ರಿಲ್ಲರ್ ಜಮಾನದಲ್ಲಿ ಹೊಸ ದೊಂದು ಲವ್ ಸ್ಟೋರಿ ಕಥೆ ಹೇಳ್ತಿರೋ ಲವ್ ಮಾಕ್ಟೈಲ್ ಚಂದನವನದಲ್ಲಿ ಸಾಮಾನ್ಯವಾಗೇ ಕುತೂಹಲ ಹುಟ್ಟಿಸಿದ್ದು,ರಿಲೀಸ್ ನಂತ್ರದ ಪ್ರತಿಕ್ರಿಯೆಗಾಗಿ ಇಡೀ ತಂಡ ಕಾದು ಕುಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ