Chandana Ananthakrishna: ನಟಿ ಚಂದನಾ ಅನಂತಕೃಷ್ಣ ಮದುವೆ: ಕಿರುತೆರೆಯ ಸ್ಟಾರ್ ಗಳೆಲ್ಲಾ ಹಾಜರ್

Krishnaveni K

ಗುರುವಾರ, 28 ನವೆಂಬರ್ 2024 (14:43 IST)
ಬೆಂಗಳೂರು: ಬಿಗ್ ಬಾಸ್ ಮತ್ತು ಕಿರುತೆರೆ ಧಾರವಾಹಿಗಳಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ಚಂದನಾ ಅನಂತಕೃಷ್ಣ ಇಂದು ಉದ್ಯಮಿ ಪ್ರತ್ಯಕ್ಷ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಕ್ಷ್ಮೀ ನಿವಾಸ ಧಾರವಾಹಿಯ ಚಿನ್ನು ಮರಿ ಎಂದೇ ಖ್ಯಾತರಾಗಿರುವ ಚಂದನಾ ಇಂದು ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಉದ್ಯಮಿಯಾಗಿರುವ ಪ್ರತ್ಯಕ್ಷ್ ಜೊತೆ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಚಂದನಾ ಮದುವೆಯಾಗಿದ್ದಾರೆ.

ಮದುವೆ ಕಾರ್ಯಕ್ರಮಕ್ಕೆ ಕಿರುತೆರೆಯ ಕಲಾವಿದರು ಬಂದು ವಧೂ ವರರಿಗೆ ಹಾರೈಸಿದ್ದಾರೆ. ನಿನ್ನೆಯಿಂದ ಮೆಹಂದಿ, ಸಂಗೀತ ಕಾರ್ಯಕ್ರಮಗಳು ನಡೆದಿದ್ದು, ಇದಕ್ಕೂ ಚಂದನಾ ಅಭಿನಯಿಸುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯ ಕಲಾವಿದರೆಲ್ಲರೂ ಬಂದು ಕುಣಿದು ಕುಪ್ಪಳಿಸಿದ್ದಾರೆ.

ಪ್ರತ್ಯಕ್ಷ್ ಕನ್ನಡ ಚಿತ್ರರಂಗದ ಹಿರಿಯ ನಟ, ದಿವಂಗತ ಉದಯ್ ಹುತ್ತಿನಗದ್ದೆ ಅವರ ಪುತ್ರ. ಇದುವರೆಗೂ ಚಂದನಾ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್ ಆಗಿಯೇ ಇಟ್ಟುಕೊಂಡಿದ್ದರು. ಇಂದು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ತಮ್ಮ ಪತಿಯ ಜೊತೆಗಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವಿಡಿಯೋವನ್ನು ಹಂಚಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ