ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಇನ್ನಿಲ್ಲ, ಸಹೋದರಿ ಕಣ್ಣೀರು
ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ನಿವಾಸಿ ಮಂಜಮ್ಮ ಹಾಗೂ ತಂಗಿ ರತ್ನಮ್ಮ ಹುಟ್ಟು ಅಂಧರು. ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಹಾಡು ಹಾಡಿ ಭಕ್ತಾದಿಗಳು ಕೊಟ್ಟ ಹಣದಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರ ಪ್ರತಿಭೆ ಜೀ ಕನ್ನಡದ ಸರಿಗಮಪ ವೇದಿಕೆಗೆ ಹತ್ತುವಂತೆ ಮಾಡಿತು.
ಈ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಹುಟ್ಟಿನಿಂದಲೇ ಅಂಧರಾಗಿದ್ದ ಸಹೋದರಿಯರಿಬ್ಬರು ಹಾಡು ಹೇಳಿ ಜೀವನ ನಡೆಸುತ್ತಿದ್ದರು. ಇದೀಗ ಸಹೋದರಿಯ ನಿಧನಿಂದ ಅಕ್ಕ ರತ್ಮಮ್ಮ ಕಂಗಲಾಗಿದ್ದಾರೆ.