ಬೆಂಗಳೂರು : ಇತ್ತಿಚೆಗೆ ಹೆಚ್ಚು ಸುದ್ದಿಯಲ್ಲಿರುವ ಮೀ ಟೂ ಅಭಿಯಾನಕಕ್ಕೆ ಬೆಂಬಲ ಸೂಚಿಸಿದವರು ಮಹಿಳೆಯ ಪರವಾಗಿ ಮಾತನಾಡಿದರೆ, ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಮಾತ್ರ ಪುರುಷರ ಪರವಾಗಿ ಮಾತನಾಡಿದ್ದಾರೆ.
ಹೌದು. ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಸಂದರ್ಭದಲ್ಲಿ ‘ಮಿ ಟೂ’ ಬಗ್ಗೆ ಮಾತನಾಡಿದ ಅವರು ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ ಎಂದಿದ್ದಾರೆ. ಅಲ್ಲದೇ ಮಿ ಟೂ’ ವನ್ನು ಸುಮ್ಮನೆ ಪ್ರಚಾರಕ್ಕೋಸರ ಬಳಸಿಕೊಳ್ಳಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಹಾಗೇ ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.